ಬಂಟ್ವಾಳ (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಆಲಡ್ಕ ಮೈದಾನದಲ್ಲಿ ಆಯೋಜಿಸಿರುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟಿನ ಮೊದಲ ದಿನದ ಪಂದ್ಯಾಟದಲ್ಲಿ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡು 4 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಉಳಿದಂತೆ ಪಿ.ಜೆ. ಸ್ಟಾರ್ಸ್, ಬೀಯಿಂಗ್ ಭೂಯಾ, ಇಖ್ಲಾಸ್ ಸ್ಟ್ರೈಕರ್ಸ್ ಹಾಗೂ ಲ್ಯಾನ್ಸರ್ ಲೀಫ್ಸ್ ತಂಡಗಳು ಆಡಿದ ಎರಡು ಪಂದ್ಯಗಳ ಪೈಕಿ ಒಂದನ್ನು ಗೆಲ್ಲುವ ಮೂಲಕ ತಲಾ 2 ಅಂಕಗಳನ್ನು ಪಡೆದುಕೊಂಡರೆ, ಕತಾರ್ ವಾರಿಯರ್ಸ್ ತಂಡ ತಾನಾಡಿದ ಎರಡೂ ಪಂದ್ಯಗಳನ್ನು ಕಳೆದುಕೊಳ್ಳುವ ಮೂಲಕ ಶೂನ್ಯ ಸಂಪಾದನೆಯೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಮುಂದಿನ ಎರಡು ವಾರಗಳಲ್ಲಿ ಮತ್ತೆ ಪಂದ್ಯಾಟ ಮುಂದುವರಿಯಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಎಪಿಎಲ್ ಸೀಸ್ನ್-4 ಟ್ರೋಫಿಯ ಮೇಲೆ ಪ್ರಭುತ್ವ ಸಾಧಿಸಲು ಹೋರಾಟ ನಡೆಸಲಿದೆ.
ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್ ಪಂದ್ಯಾಟ ಉದ್ಘಾಟಿಸಿದರು. ಅಬ್ದುಲ್ ರಹಿಮಾನ್ ಮೋನು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಉದ್ಯಮಿ ಹನೀಫ್ ಹಾಸ್ಕೋ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ, ಇಬ್ರಾಹಿಂ ಕೈಫ್, ಕಾಸಿಂ ಗೂಡಿನಬಳಿ, ಹನೀಫ್ ಬಂಗ್ಲೆಗುಡ್ಡೆ ಮೊದಲಾದ ಗಣ್ಯರು ಭಾಗವಹಿಸಿದ್ದರು.
ತನ್ವೀರ್ ಮಾಲಕತ್ವದ ಲ್ಯಾನ್ಸರ್ ಲೀಫ್ಸ್, ಖಲಂದರ್ ಮಾಲಕತ್ವದ ಎ ಟು ಝಡ್ ವಾರಿಯರ್ಸ್, ಫಾರೂಕ್ ಮತ್ತು ಎನ್.ಬಿ. ಗ್ರೂಪ್ ಮಾಲಕತ್ವದ ಬೀಯಿಂಗ್ ಭೂಯಾ ಹಾಗೂ ಜುನೈದ್ ಮಾಲಕತ್ವದ ಇಖ್‍ಲಾಸ್ ಸ್ಟ್ರೈಕರ್ಸ್ ತಂಡಗಳು ಕೂಟದಲ್ಲಿ ಭಾಗವಹಿಸುತ್ತಿದೆ. ಶರಣ್ ಬಂಟ್ವಾಳ ಹಾಗೂ ಸಚಿನ್ ಬಂಟ್ವಾಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಹನೀಫ್ ಯು. ಸ್ಕೋರರ್ ಆಗಿ ಸಹಕರಿಸಿದರು. ಹಸೈನಾರ್, ಶಹೀದ್ ಗುಡ್ಡೆಅಂಗಡಿ ವೀಕ್ಷಕ ವಿವರಣೆಗಾರರಾಗಿ ಸಹಕರಿಸಿದರು.
0 comments:
Post a Comment